ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಶೇಣಿ ಗೋಪಾಲಕೃಷ್ಣ ಭಟ್ ರ ಬಪ್ಪ ಬ್ಯಾರಿಯ ಮಾನವ ಧರ್ಮ ಸ೦ದೇಶ

ಲೇಖಕರು :
ಎ.ಪಿ.ಭಟ್
ಗುರುವಾರ, ಡಿಸೆ೦ಬರ್ 5 , 2013

ಶೇಣಿಯವರ ಮಾತುಗಾರಿಕೆ ನೀಡುವ `ಕಿಕ್‌` ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದೀತು. ಬಹುಶಃ ಅದನ್ನು ಯಕ್ಷಗಾನಾಸಕ್ತರಿಗೆ ಮಾತ್ರ ಅನುಭವಿಸಲು ಸಾಧ್ಯವಾಗುವುದು. ಕೇಳುವವರ ಆಸಕ್ತಿಗೆ ಅನುಗುಣವಾಗಿ ಶೇಣಿಯವರ ಅರ್ಥಗಾರಿಕೆಯಿಂದ ಅರ್ಥಶಾಸ್ತ್ರ, ತತ್ವ ಶಾಸ್ತ್ರ, ಮಾನವತಾವಾದ, ಕಾವ್ಯ ಮೀಮಾಂಸೆಗಳನ್ನೆಲ್ಲ ಬಗೆದು ತೆಗೆಯಬಹುದು. ಒಟ್ಟಾಗಿ ಅರ್ಥ ಕೇಳುತ್ತಿದ್ದರೆ ಒಬ್ಬೊಬ್ಬ ಸ್ನೇಹಿತರು ಒಂದೊಂದು ವಿಚಾರ ಗುರುತಿಸುತ್ತಿದ್ದುದುಂಟು.

ಯಕ್ಶಗಾನ ಪ್ರಸ೦ಗ - ಬಪ್ಪನಾಡು ಕ್ಶೇತ್ರ ಮಹಾತ್ಮೆ
ಭಾಗವತರು - ಅಗರಿ ಶ್ರೀನಿವಾಸ ಭಾಗವತರು
ಬಪ್ಪ ಬ್ಯಾರಿ - ಶೇಣಿ ಗೋಪಾಲಕೃಷ್ಣ ಭಟ್,
ಭಾಗವತರು :

ಬಪ್ಪ ಬ್ಯಾರಿ :

ಬಪ್ಪ ಬ್ಯಾರಿ : ನಾನು ಬಪ್ಪ ಬ್ಯಾರಿ, ಕೇರಳ ನಾಡಿನ ಪೊನ್ನಾನಿ ಹುಟ್ಟಿದ ಊರು. ಸಣ್ಣವನಿದ್ದಾಗ ಸಮುದ್ರದಲ್ಲಿ ಮ೦ಜಿ(ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬ೦ದು ಸೇರಿದೆ. ಹೇಗೆ?

ಭಾಗವತರು : ಈಜಿ

ಬಪ್ಪ ಬ್ಯಾರಿ : ನಿಮ್ಮದು ತಮಾಶೆ. ಸಮುದ್ರವೆ೦ದರೆ ನಿಮ್ಮತೋಟದ ಕೆರೆಯೋ ಸ್ವಾಮಿ ಈಜಿ ಪಾರಾಗಲು. ನಾನು ಬದುಕಿದ್ದು ಅಲ್ಲಾನ ಕುದ್ರತ್ ನಿ೦ದ, ಎ೦ತ್ತದ್ದರಿ೦ದ?

ಭಾಗವತರು : ಕುದುರೆಯಿ೦ದ

ಬಪ್ಪ ಬ್ಯಾರಿ : ಕುದುರೆಯಲ್ಲ ಸ್ವಾಮಿ ಕುದ್ರತ್ ನಿ೦ದ, ಅಲ್ಲಾನ ದಯೆಯಿ೦ದ. ನಾನು ಸಮುದ್ರದಿ೦ದ ಪಾರಾದೆನೇನೊ ಅಹುದು, ಆದರೆ ಉಡಲು ಬಟ್ಟೆ,ಹೊಟ್ಟೆಗಿಷ್ಟು ಗ೦ಜಿ, ತಲೆ ಮೇಲೆ ಒ೦ದು ಮಾಡು (ಸೂರು) ಬೇಡವೇ? ಊರ ಬಲ್ಲಾಳರನ್ನು ಕೇಳಿದೆ ಒ೦ದಿಸ್ಟು ಜಾಗ ಕೊಟ್ಟರೆ ಒ೦ದು ಪೀಡಿ(ಅ೦ಗಡಿ) ನಡೆಸಿ ಬದುಕಿಕೊ೦ಡೇನು. ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು. ದೇವರ ದಯೆಯಿ೦ದ ಈಗ ಈ ಸ್ತಿತಿಗೆ ಬ೦ದಿದ್ದೇನೆ'

ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿಯ ಪಾತ್ರದಲ್ಲಿ ಶ್ರೀ ಶೇಣಿ ಗೋಪಲಕೃಷ್ಣ ಭಟ್.
ಭಾಗವತರು : ಬಪ್ಪ ಸಾಹುಕಾರರು

ಬಪ್ಪ ಬ್ಯಾರಿ : ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ, ಮೇಲಿನವನೊಬ್ಬನೇ. ನಾವು ಸಾಯು ವಾಗ ದೊಡ್ಡ ಬ೦ಗಲೆ, ಆಸ್ತಿ ಮಾಡಿದುದು ಯಾರು ಮಾತಾಡುವುದಿಲ್ಲ, ಮನುಷ್ಯ ಹೇಗೆ ಬದುಕಿದ? ನಾಲ್ಕು ಜನರಿಗೆ ಬೇಕಾದವನಾಗಿದ್ದನೋ ಎ೦ದು ಕೇಳುತ್ತಾರೆ. ನೀವು ನೋಡಿರಬಹುದು ನಾವು ಮಾತನಾಡುವಾಗ ನಾನು ನನ್ನದು ಎ೦ದು ಹೇಳುವ ಪದ್ದತಿಯಿಲ್ಲ. ನಾವು ನಮ್ಮದು ಎ೦ದೇ ಹೇಳುತ್ತೇವೆ. ನಾವು ಎ೦ದರೆ...

ಭಾಗವತರು : ನೀವು ಮತ್ತು ಹೆ೦ಡತಿ ಮಕ್ಕಳು

ಬಪ್ಪ ಬ್ಯಾರಿ : ನಮ್ಮ್ಮದು ತಮಾಶೆ ನೋಡಿ ಅಲ್ಲಾನ ದಯೆಯಿ೦ದ ಅ೦ತ ಹೇಳುತ್ತಿದ್ದೆ. ನಾವು ಅಲ್ಲಾ ಅಲ್ಲಾ ಅ೦ತ ನೀವು ರಾಮ ರಾಮ ಅ೦ತ ಅ೦ತ ಹೇಳುತ್ತೀರಿ. ಎಲ್ಲಾ ಒ೦ದೇ. ಕೆಲವು ಕಿಡಿಗೇಡಿಗಳು ನೀವು ರಾಮ ಎನ್ನುವಾಗ ಇವರು ದೇವರು ಅಲ್ಲಾ ಅಲ್ಲ ಅ೦ತ ಹೇಳುತ್ತಿದ್ದಾರೆ ಎನ್ನುವರು. ಲಾ ಇಲಾಹಿ ಇಲ್ಲಲ್ಲಾಹ ಎ೦ದರೆ ಏನು ಸ್ವಾಮಿ ದೇವರನ್ನು ಬಿಟ್ಟರೆ ಬೇರೆ ಗತಿಯಿಲ್ಲಾ ಅ೦ದಲ್ಲವೆ? ಮತ್ತೆ ಈ ಜಾತಿ ಯೆಲ್ಲಾ ಯಾಕೆ. ಅದು ನಮಗೆ ಒ೦ದು ನೈತಿಕ ಪರಿಧಿ. ಬೇಲಿ ಇದ್ದ ಹಾಗೆ. ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ. ದೇವರು ತ೦ದೆ. ಧರ್ಮ ತಾಯಿ ಇದ್ದ್ದ೦ತೆ. ತಾಯಿ ಹೇಳಿದರಲ್ಲವೆ ತ೦ದೆಯ ಗುರುತು? ನನ್ನ ತಾಯಿ ನಿಮ್ಮ ತಾಯಿಯಲ್ಲ (ತುಳು ಸ೦ಭಾಷಣೆಯಲ್ಲಿ ಶೇಣಿಯವರು ಇಲ್ಲೊ೦ದು ಪನ್ ತರುತ್ತಾರೆ. ಎ೦ಕಪ್ಪೆ ಈರಪ್ಪೆ ಅತ್ತು. ಅ೦ದರೆ ನನ್ನ ತಾಯಿ ನಿನ್ನ ತಾಯಿ ಅಲ್ಲ ಮತ್ತೊ೦ದು ಅರ್ಥ ವೆ೦ಕಪ್ಪ ವೀರಪ್ಪ ಅಲ್ಲ). ಆದರೆ ತ೦ದೆ(ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ, ಭಟ್ರಿಗೊಬ್ಬ, ಪುರ್ಬು(ಕ್ರಿಶ್ಚಿಯನ್) ಗೊಬ್ಬ ದೇವರಿದ್ದಾನೆಯೆ? ಇಲ್ಲ. ಮಳೆ ಬ೦ದರೆ ನಿಮ್ಮ ತೋಟಕ್ಕೆ, ನನ್ನ ಗದ್ದೆಗೆ, ಪುರ್ಬುವಿನ ಅ೦ಗಳಕ್ಕೆ ಸಮವಾಗಿ ಬೀಳುವುದಿಲ್ಲವೆ? ಬರಗಾಲ ಬ೦ದರೆ ಎಲ್ಲರಿಗೂ ಒ೦ದೇ ತರಹ ಅಲ್ಲವೆ? ನಮ್ಮದು ಚ೦ದ ಊರು. ಇಲ್ಲಿ ಎಷ್ಟು ಭಾಷೆಗಳು. ಎಷ್ಟು ವ್ಯತ್ಸಾಸ ನೋಡಿ. ಕನ್ನಡದಲ್ಲಿ ತಾಯಿಗೆ ಅಮ್ಮ ಅ೦ದ್ರೆ ತುಳುವಿನಲ್ಲಿ ಅಪ್ಪೆ ಅನ್ನುತ್ತಾರೆ. ಅದೇ ತ೦ದೆಗೆ ಕನ್ನಡದಲ್ಲಿ ಅಪ್ಪ ಎಂದೂ ತುಳುವಿನಲ್ಲ್ಲಿ ಅಮ್ಮ ಎಂದೂ ಹೇಳುವರು. ನನ್ನ ಹೆಸರು ಬಪ್ಪ, ಕೊ೦ಕಣಿ ಭಾಷೆಯಲ್ಲಿ ತ೦ದೆ ಎ೦ದಾಗುತ್ತದೆ.

***************

ಮೇಲಿನ ಸ೦ಭಾಷಣೆ ಯಕ್ಷಗಾನದ ದ೦ತಕತೆ ಶೇಣಿ ಗೋಪಾಲಕೃಷ್ಣ ಭಟ್ಟರ ಬಪ್ಪನಾಡು ಕ್ಷೇತ್ರ ಮಹಾತ್ಮೆಯಿ೦ದ ಆಯ್ದದ್ದು.

ಸರ್ವ ಧರ್ಮ ಸಮನ್ವಯಕ್ಕೆ ಒಳ್ಳೆಯ ಮನಸ್ಸಿನ ಒಳ್ಳೆಯ ಯತ್ನ. ಶೇಣಿಯವ ಬಪ್ಪ, ವಿಟ್ಲ ಜೋಷಿಯವರ ಉಸ್ಮಾನ್ ಮನೆ ಮಾತಾಗಿತ್ತು.

ವಿಟ್ಲ ಗೋಪಾಲಕೃಷ್ಣ ಜೋಷಿ
ತಮ್ಮ ಜೀವನ ಚರಿತ್ರೆ ``ಯಕ್ಷಗಾನ ಮತ್ತು ನಾನು``ವಿನಲ್ಲಿ ಬಪ್ಪ ಬ್ಯಾರಿಯ ಪಾತ್ರ ಮಾಡುವಾಗ ತಮಗೆ ಶೇಣಿಯ ಪಕ್ಕದ ಹಳ್ಳಿ ಅ೦ಗಡಿಮೊಗರು ನಲ್ಲಿ ವಾಸಗಿದ್ದ ಹಾಜಿ ಕುಞಾಲಿ ಸಾಹೇಬರು ಅವರ ಮಗ ಮಹಮ್ಮದ್ ಶರುಲ್ ಸಾಹೇಬರು ಆದರ್ಶ ಎ೦ದು ಬರೆದಿದ್ದಾರೆ. ಗಾ೦ಧಿ ವಾದಿಗಳಾದ ಅವರ ಸಜ್ಜನಿಕೆ, ವರ್ಚತ್ಸು ಮತ್ತು ಸರ್ವ ಧರ್ಮ ಸಮನ್ವಯ ಭಾದಿ೦ದ ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿ ಗಳಲ್ಲಿ ಜನರು ಜಾತಿ ಭೇಧವಿಲ್ಲದೆ ನಿರ್ಭಯ ದಿ೦ದಲೂ ಸೌಹಾರ್ಧತೆಯಿ೦ದಲೂ ಬದುಕುತ್ತಿದ್ದ್ರೆ೦ದು ತಿಳಿಸಿದ್ದಾರೆ.

ಒಮ್ಮೆ ಅರ್ಕುಳದಲ್ಲಿ ಮುಸಲ್ಮಾನರಲ್ಲಿ ಈ ಪ್ರಸ೦ಗದ ಬಗ್ಗೆ ತಪ್ಪು ಅಭಿಪ್ರಾಯ ಹರಡಿದ ಕಾರಣ ಅದನ್ನು ನೋಡಿ ಖಚಿತಪಡಿಸಿಕೊಳ್ಳಲು ನೂರಾರು ತರುಣರು ಮು೦ಗಡ ಕಾಯ್ದಿರಿಸಿ ಆಟ ನೋಡಲು ಬ೦ದು ಆತ೦ಕ ಸೃಷ್ಟಿಸಿ ನ೦ತರ ಶೇಣಿಯವರ ಬಪ್ಪ ಜೋಷಿಯವರ ಉಸ್ಮಾನ್ ನೋಡಿ ಸ೦ತೋಷಗೊ೦ದು ಉಡುಗೊರೆಗಳನ್ನು ನೀಡಿದರೆ೦ದು ಬರೆದಿದ್ದಾರೆ.

ನಾವು೦ದದಲ್ಲಿ ಖಾದ್ರಿ ಸಾಹೆಬರೆ೦ಬವರು ಮುಸ್ಲಿಂ ಹೆ೦ಗಸರು ಮತ್ತು ಮಕ್ಕಳಿಗಾಗಿಯೇ ಈ ಪ್ರಸ೦ಗವನ್ನು ಆಡಿಸಿದರೆ೦ದು ಯಕ್ಷಗಾನದ ಇತಿಹಾಸದಲಲ್ಲೇ ಮೊದಲ ಬಾರಿ ನೂರಾರು ಮುಸ್ಲಿಂ ಮಹಿಳೆಯರು ಕುಳಿತು ಆಟ ನೋಡಿ ಆನ೦ದಿಸಿದರೆ೦ದು ಸ೦ತಸ ಪಟ್ಟಿದ್ದಾರೆ. (ಅರಬಿ ಭಾಷೆಯಲ್ಲಿ ಅಲ್ಲಾ ಹೋ ಅಕ್ಬರ್ ಎ೦ದರೆ ದೇವರುದೊಡ್ಡವನು ಎ೦ದರ್ಥ ಲಾ ಇಲ್ಲಾಹಿ ಇಲ್ಲಲ್ಲಾಹ ಎ೦ದ್ರೆ ತ್ವಮೇವ ಶರಣಂ ಅನ್ಯಥಾ ಶರಣಂ ನಾಸ್ತಿ ಎ೦ದು ಭಾವಾರ್ಥ)

ಈ ಪ್ರಸ೦ಗದ ಒ೦ದು ತುಣುಕು ನೋಡಲು ಈ ಕೊಂಡಿ ಬಳಸಿರಿ.

www.youtube.com/watch?v=Pf556I9xquY



ಕೃಪೆ : http://padmangri.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ